ಯಾರಿಗೂ ಕಾಣದ
ನಡು ಕಾಡಲಿ
ಅರಳಿದೆ ಹೂವೊಂದು
ಏನೆಂದು
ಹೆಸರಿಡಲಿ
ನಾ ಇಂದು....
ನಡು ಕಾಡಲಿ
ಅರಳಿದೆ ಹೂವೊಂದು
ಏನೆಂದು
ಹೆಸರಿಡಲಿ
ನಾ ಇಂದು....
ಎಲ್ಲರನು ಕೈ ಬಿಸಿ ಕರೆಯುತಿದೆ
ನೋಡುವವರು ಯಾರಿಲ್ಲವೇ
ಆದರೂ ಆ ಸೌಂದರ್ಯಕೆ
ಸರಿಯಾಟಿ ಯಾವುದಿಲ್ಲ ಅಲ್ಲವೇ
ಆ ಹೂವಿನ ಚೆಲುವ ವರ್ಣಿಸಲು
ಪದಗಳು ಸಾಲದೆ
ನೋಡುತ ನೋಡುತ ಈ ನಯನ
ತನ್ನ ನೋಟದಲ್ಲೇ ಸೆರೆ ಹಿಡಿದಿದೆ.
ತನ್ನ ಸೌಂದರ್ಯ
ಬಚ್ಚಿಡದೇ ಬಿಚ್ಚಿಟ್ಟಿದೆ
ಆದರೆ ನೋಡುವವರು
ಯಾರಿಲ್ಲದೇ
ತನ್ನಷ್ಟಕೆ ತಾನೇ
ಬಾಡುತ ಹೋಗಿದೆ..
ಜೀವನ ಕ್ಷಣಿಕ ಆದರೂ
ಹಿತಗೊಳಿಸಿದೆ..
ಅಚ್ಚಳಿಯದೆ ಮನದಲಿ
ಸದಾ ಉಳಿದಿದೆ...
ಚೆಲುವು ಎಂದರೆ ಏನು
ಅರ್ಥ ಇದೇ ಆಗಿದೆ
ನೋಡುವವರು ಯಾರಿಲ್ಲವೇ
ಆದರೂ ಆ ಸೌಂದರ್ಯಕೆ
ಸರಿಯಾಟಿ ಯಾವುದಿಲ್ಲ ಅಲ್ಲವೇ
ಆ ಹೂವಿನ ಚೆಲುವ ವರ್ಣಿಸಲು
ಪದಗಳು ಸಾಲದೆ
ನೋಡುತ ನೋಡುತ ಈ ನಯನ
ತನ್ನ ನೋಟದಲ್ಲೇ ಸೆರೆ ಹಿಡಿದಿದೆ.
ತನ್ನ ಸೌಂದರ್ಯ
ಬಚ್ಚಿಡದೇ ಬಿಚ್ಚಿಟ್ಟಿದೆ
ಆದರೆ ನೋಡುವವರು
ಯಾರಿಲ್ಲದೇ
ತನ್ನಷ್ಟಕೆ ತಾನೇ
ಬಾಡುತ ಹೋಗಿದೆ..
ಜೀವನ ಕ್ಷಣಿಕ ಆದರೂ
ಹಿತಗೊಳಿಸಿದೆ..
ಅಚ್ಚಳಿಯದೆ ಮನದಲಿ
ಸದಾ ಉಳಿದಿದೆ...
ಚೆಲುವು ಎಂದರೆ ಏನು
ಅರ್ಥ ಇದೇ ಆಗಿದೆ