Sunday, 22 May 2016

"ಕೊಟ್ಟಿಗೆ"



ಈ ಜಗತ್ತೇ ಆಧುನಿಕತೆಯಲ್ಲಿ ಮುಳುಗಿರುವಾಗ ನಮ್ಮ ಸಮಾಜದಲ್ಲಿ ಅಲ್ಲಲ್ಲಿ ದನಕರು ವಾಸಿಸುವ ಕೊಟ್ಟಿಗೆ ಈಗಲೂ ಕಾಣಸಿಗುತ್ತದೆ.
ಎಲ್ರೂ ತಮ್ಮ ತಮ್ಮ ಅಭಿರುಚಿಗೆ ತಕ್ಕ ಹಾಗೇ ಅನೇಕ ಸುಂದರ ಕವನಗಳನ್ನು ರಚಿಸಿದ್ದಾರೆ.ಆದರೆ ನಾನು ಖಾಲಿ ಇದ್ದಾಗ ನನಗೆ ಅನಿಸಿದ್ದನ್ನು ಇದ್ದದ್ದನ್ನು ಇದ್ದ ಹಾಗೆ ಸುಮ್ಮನೆ ಗೀಚಿದ್ದೇನೆ.
ಈ ಕೊಟ್ಟಿಗೆ,ದನಕರು,ಹಸಿ,ಹುಲ್ಲು,ಹಿಂಡಿ,ತೆಳಿ,ದರಕು,ಸೊಪ್ಪು,ಆಕಚ,ಗೊಬ್ಬರ...ಇವೆಲ್ಲಾ ನಿಮಗೆ ಗೊತ್ತಾ?

"ಕೊಟ್ಟಿಗೆ"

ಮೇಲೆರಡು ಜಂತಿ ಕಟ್ಟಿಗೆ
ಆ ಕಡೆ ಗೋಡೆ ಇಟ್ಟಿಗೆ,
ದನಕರುಗಳಿವೆ ಒಟ್ಟಿಗೆ
ಇವೇ ನಮ್ಮ ಕೊಟ್ಟಿಗೆ.

ದಿನವೂ ಹಾಕಿದರೆ
ಸೊಪ್ಪು ದರಕು,
ಸುಂದರ ಆಗ್ತವೆ
ದನಕರುಗಳ ಬದುಕು.

ದಿನಾ ಬೇಕು ಅವಕೆ
ಹುಲ್ಲು ಹಸಿ ಹಿಂಡಿ,
ಅವೇ ತಾನೇ
ದನಕರುಗಳ ತಿಂಡಿ.

ವಾರಕ್ಕೊಮ್ಮೆ ತೆಗಿಬೇಕು
ತ್ಯಾಜ್ಯ ಗೊಬ್ಬರ,
ಆಗ ಮಾತ್ರ ನೆಮ್ಮದಿಯಾಗಿ
ಮಲಗ್ತವೆ ದನಕರ.

ತೋಟಕೆ ಉಪಯೋಗ
ಈ ಗೊಬ್ಬರ,
ಆಗ ನಮ್ಮಿ ಬೆಳೆ
ಬದುಕು ಸುಂದರ.

ಪ್ಯಾಕೆಟ್,ಪೌಡರ್
ಹಾಲಿಗಿಂತ ಎಷ್ಟೋ ಮೇಲು,
ನಾವ್ ಬಳಸೋ
ಗೋವಿನ ಹಾಲು.

ಪೂಜಿಸಿ ನೀವು ಯಾವಾಗಲೂ
ಈ ಗೋಮಾತೆಯನ್ನು,
ಕೊಡುತ್ತೆ ನಿಮಗೆ
ಸದಾ ನಲಿವನ್ನು...

ವಸಂತ ನಾಯ್ಕ...{ನನ್ನ ಭಾಷೆಲಿ ಬರೆದದ್ದು....ಅರ್ಥ ಆಗದೆ ಇದ್ರೆ ಕೇಳಿ}

No comments:

Post a Comment